[go: up one dir, main page]

WhatsApp Messenger

4.3
194ಮಿ ವಿಮರ್ಶೆಗಳು
5ಬಿ+
ಡೌನ್‌ಲೋಡ್‌ಗಳು
ಎಡಿಟರ್‌ಗಳ ಆಯ್ಕೆ
ಕಂಟೆಂಟ್‍ ರೇಟಿಂಗ್
ಪ್ರತಿಯೊಬ್ಬರು
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ
ಸ್ಕ್ರೀನ್‌ಶಾಟ್ ಚಿತ್ರ

ಈ ಆ್ಯಪ್ ಕುರಿತು

WhatsApp from Meta ಉಚಿತ ಮೆಸೇಜಿಂಗ್ ಹಾಗೂ ವೀಡಿಯೋ ಕಾಲಿಂಗ್ ಆ್ಯಪ್ ಆಗಿದೆ. 180 ಕ್ಕಿಂತ ಹೆಚ್ಚು ದೇಶಗಳಲ್ಲಿ ಸುಮಾರು 2 ಬಿಲಿಯನ್‍‌ಗಿಂತ ಹೆಚ್ಚು ಜನರು ಇದನ್ನು ಬಳಸುತ್ತಿದ್ದಾರೆ. ಇದು ಸರಳವಾಗಿದೆ, ವಿಶ್ವಾಸಾರ್ಹವಾಗಿದೆ ಹಾಗೂ ಗೌಪ್ಯವಾಗಿದೆ. ಇದರ ಮೂಲಕ ನೀವು ಗೆಳೆಯರು ಮತ್ತು ಕುಟುಂಬದೊಂದಿಗೆ ಸುಲಭವಾಗಿ ಸಂಪರ್ಕದಲ್ಲಿರಬಹುದು. ಸಂಪರ್ಕ ದುರ್ಬಲವಾಗಿದ್ದಾಗಲೂ ಸಹ, ಮೊಬೈಲ್ ಹಾಗೂ ಡೆಸ್ಕ್‌ಟಾಪ್ ಸಾಧನ‌ಗಳಲ್ಲಿ, WhatsApp ಕಾರ್ಯನಿರ್ವಹಿಸುತ್ತದೆ. ಇದನ್ನು ಬಳಸಲು ಸಬ್‌ಸ್ಕ್ರಿಪ್ಶನ್‌ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ*.

ಜಗತ್ತಿನಾದ್ಯಂತ ಖಾಸಗಿ ಮೆಸೇಜ್‌

ನೀವು ನಿಮ್ಮ ಸ್ನೇಹಿತರು ಹಾಗೂ ಕುಟುಂಬಕ್ಕೆ ಕಳುಹಿಸುವ ವೈಯಕ್ತಿಕ ಮೆಸೇಜ್‌ಗಳು ಹಾಗೂ ಕಾಲ್‌ಗಳು ಎಂಡ್‌-ಟು-ಎಂಡ್‌ ಎನ್‌ಕ್ರಿಪ್ಟ್‌ ಆಗಿರುತ್ತವೆ. ಈ ಚಾಟ್‌ನ ಹೊರಗೆ ಇರುವವರು, WhatsApp ಕೂಡ, ಇವುಗಳನ್ನು ಓದಲು ಅಥವಾ ಕೇಳಲು ಸಾಧ್ಯವಾಗುವುದಿಲ್ಲ.

ಸರಳ ಹಾಗೂ ಸುರಕ್ಷಿತ ಸಂಪರ್ಕಗಳು, ಕ್ಷಣಾರ್ಧದಲ್ಲಿ ಕಾರ್ಯನಿರ್ವಹಿಸುತ್ತದೆ

ನಿಮ್ಮ ಫೋನ್‌ ಸಂಖ್ಯೆ ಒಂದಿದ್ದರೆ ಸಾಕು. ಬಳಕೆದಾರ ಹೆಸರು ಅಥವಾ ಲಾಗಿನ್‌ಗಳ ಅವಶ್ಯಕತೆ ಇಲ್ಲ. ನಿಮ್ಮ ಕಾಂಟ್ಯಾಕ್ಟ್‌ನಲ್ಲಿರುವವರ ಪೈಕಿ ಯಾರೆಲ್ಲ WhatsApp ನಲ್ಲಿ ಇದ್ದಾರೆ ಎಂಬುದನ್ನು ತ್ವರಿತಗತಿಯಲ್ಲಿ ನೋಡಬಹುದು ಹಾಗೂ ಅವರಿಗೆ ಮೆಸೇಜ್‌ ಮಾಡಲು ಪ್ರಾರಂಭಿಸಬಹುದು.

ಅತ್ಯುತ್ತಮ ಗುಣಮಟ್ಟದ ಧ್ವನಿ ಹಾಗೂ ವೀಡಿಯೊ ಕಾಲ್‌ಗಳು

ಗರಿಷ್ಠ 8 ಜನರೊಂದಿಗೆ ಸುರಕ್ಷಿತವಾದ ವೀಡಿಯೊ ಹಾಗೂ ವಾಯ್ಸ್ ಕಾಲ್‌ಗಳನ್ನು ಮಾಡಿ*. ಫೋನ್‌ನ ಇಂಟರ್‌ನೆಟ್‌ ಮೂಲಕ, ಸಂಪರ್ಕ ದುರ್ಬಲವಾಗಿದ್ದಾಗ ಕೂಡ, ನೀವು ಮೊಬೈಲ್ ಸಾಧನಗಳ ನಡುವೆ ಸರಾಗವಾಗಿ ಕಾಲ್ ಮಾಡಬಹುದು.

ಸಂಪರ್ಕದಲ್ಲಿರಲು ಗ್ರೂಪ್‌ ಚಾಟ್‌ಗಳು

ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಸಂಪರ್ಕದಲ್ಲಿರಿ. ಮೆಸೇಜ್‌ಗಳು, ಫೋಟೋಗಳು, ವೀಡಿಯೊಗಳು ಹಾಗೂ ಡಾಕ್ಯುಮೆಂಟ್‌ಗಳನ್ನು ಮೊಬೈಲ್ ಹಾಗೂ ಡೆಸ್ಕ್‌ಟಾಪ್‌ಗಳಾದ್ಯಂತ ಹಂಚಿಕೊಳ್ಳಲು ಕೊನೆಯಿಂದ-ಕೊನೆಯವರೆಗೆ ಎನ್‌ಕ್ರಿಪ್ಟ್‌ ಮಾಡಿದ ಗ್ರೂಪ್‌ ಚಾಟ್‌ಗಳು ಅನುವು ಮಾಡಿಕೊಡುತ್ತವೆ.

ನೈಜ ಸಮಯದಲ್ಲಿ ಸಂಪರ್ಕದಲ್ಲಿರಿ

ನಿಮ್ಮ ವೈಯಕ್ತಿಕ ಅಥವಾ ಗ್ರೂಪ್‌ ಚಾಟ್‌ಗಳಲ್ಲಿರುವವ ಜೊತೆ ಮಾತ್ರ ನಿಮ್ಮ ಲೊಕೇಶನ್‌ ಹಂಚಿಕೊಳ್ಳಿ. ಹಾಗೂ, ಯಾವುದೇ ಕ್ಷಣದಲ್ಲಿ ಹಂಚಿಕೆ ನಿಲ್ಲಿಸಿ. ಅಥವಾ ತ್ವರಿತಗತಿಯಲ್ಲಿ ಸಂಪರ್ಕ ಸಾಧಿಸಲು ಧ್ವನಿ ಮೆಸೇಜ್‌ ರೆಕಾರ್ಡ್‌ ಮಾಡಿ.

ಸ್ಟೇಟಸ್‌ ಮೂಲಕ ದೈನಂದಿನ ಕ್ಷಣಗಳನ್ನು ಹಂಚಿಕೊಳ್ಳಿ

ಪಠ್ಯ, ಫೋಟೋಗಳು, ವೀಡಿಯೊ ಹಾಗೂ GIF ಅಪ್‌ಡೇಟ್‌ಗಳನ್ನು ಹಂಚಿಕೊಳ್ಳಲು ಸ್ಟೇಟಸ್‌ ಅನುವು ಮಾಡಿಕೊಡುತ್ತದೆ. ಅವು 24 ಗಂಟೆಗಳಲ್ಲಿ ಅದೃಶ್ಯವಾಗುತ್ತವೆ. ನಿಮ್ಮೆಲ್ಲಾ ಕಾಂಟ್ಯಾಕ್ಟ್‌ಗಳೊಂದಿಗೆ ಅಥವಾ ಆಯ್ಕೆ ಮಾಡಿದವರೊಂದಿಗೆ ಮಾತ್ರ ಸ್ಟೇಟಸ್‌ ಪೋಸ್ಟ್‌ಗಳನ್ನು ಶೇರ್ ಮಾಡಿಕೊಳ್ಳಬಹುದು.

ನಿಮ್ಮ ಮಣಿಕಟ್ಟಿನಿಂದಲೇ ಸಂಭಾಷಣೆಗಳನ್ನು ಮುಂದುವರಿಸಲು, ಮೆಸೇಜ್‌ಗಳಿಗೆ ಪ್ರತ್ಯುತ್ತರಿಸಲು ಮತ್ತು ಕಾಲ್‌ಗಳನ್ನು ಸ್ವೀಕರಿಸಲು ನಿಮ್ಮ Wear OS ವಾಚ್‌ನಲ್ಲಿ WhatsApp ಬಳಸಿ. ಹಾಗೂ ನಿಮ್ಮ ಚಾಟ್‌ಗಳನ್ನು ಸುಲಭವಾಗಿ ಪ್ರವೇಶಿಸಲು ಮತ್ತು ವಾಯ್ಸ್ ಮೆಸೇಜ್‌ಗಳನ್ನು ಕಳುಹಿಸಲು ಅಡ್ಡಿಗಳು ಮತ್ತು ತೊಡಕುಗಳನ್ನು ನಿಯಂತ್ರಿಸಿ.


*ಡೇಟಾ ಶುಲ್ಕಗಳು ಅನ್ವಯಿಸಬಹುದು. ವಿವರಗಳಿಗಾಗಿ ನಿಮ್ಮ ಪೂರೈಕೆದಾರರನ್ನು ಸಂಪರ್ಕಿಸಿ.

---------------------------------------------------------

ಯಾವುದೇ ಪ್ರತಿಕ್ರಿಯೆ ಅಥವಾ ಪ್ರಶ್ನೆಗಳಿದ್ದರೆ, ದಯವಿಟ್ಟು WhatsApp > ಸೆಟ್ಟಿಂಗ್‌ಗಳು > ಸಹಾಯ > ನಮ್ಮನ್ನು ಸಂಪರ್ಕಿಸಿಗೆ ಹೋಗಿ
ಅಪ್‌ಡೇಟ್‌ ದಿನಾಂಕ
ಜೂನ್ 3, 2024

ಡೇಟಾ ಸುರಕ್ಷತೆ

ಸುರಕ್ಷತೆ ಎಂಬುದು ನಿಮ್ಮ ಡೇಟಾವನ್ನು ಡೆವಲಪರ್‌ಗಳು ಹೇಗೆ ಸಂಗ್ರಹಿಸುತ್ತಾರೆ ಮತ್ತು ಹಂಚಿಕೊಳ್ಳುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದ ಪ್ರಾರಂಭವಾಗುತ್ತದೆ. ನಿಮ್ಮ ಬಳಕೆ, ಪ್ರದೇಶ ಮತ್ತು ವಯಸ್ಸನ್ನು ಆಧರಿಸಿ ಡೇಟಾ ಗೌಪ್ಯತೆ ಮತ್ತು ಭದ್ರತಾ ಅಭ್ಯಾಸಗಳು ಬದಲಾಗಬಹುದು. ಡೆವಲಪರ್ ಈ ಮಾಹಿತಿಯನ್ನು ಒದಗಿಸಿದ್ದಾರೆ ಮತ್ತು ಕಾಲ ಕ್ರಮೇಣ ಇದನ್ನು ಅಪ್‌ಡೇಟ್ ಮಾಡಬಹುದು.
ಥರ್ಡ್ ಪಾರ್ಟಿಗಳ ಜೊತೆ ಯಾವುದೇ ಡೇಟಾವನ್ನು ಹಂಚಿಕೊಳ್ಳಲಾಗಿಲ್ಲ
ಡೆವಲಪರ್‌ಗಳು ಹಂಚಿಕೊಳ್ಳುವಿಕೆಯನ್ನು ಹೇಗೆ ಘೋಷಿಸುತ್ತಾರೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ
ಈ ಡೇಟಾ ಪ್ರಕಾರಗಳನ್ನು ಈ ಆ್ಯಪ್ ಸಂಗ್ರಹಿಸಬಹುದು
ಸ್ಥಳ, ವೈಯಕ್ತಿಕ ಮಾಹಿತಿ ಮತ್ತು 5 ಇತರರು
ಡೇಟಾವನ್ನು ರವಾನಿಸುವಾಗ ಎನ್‌ಕ್ರಿಪ್ಟ್ ಮಾಡಲಾಗಿದೆ
ಡೇಟಾವನ್ನು ಅಳಿಸಲು ನೀವು ವಿನಂತಿಸಬಹುದು

ರೇಟಿಂಗ್‌ಗಳು ಮತ್ತು ಅಭಿಪ್ರಾಯಗಳು

4.3
190ಮಿ ವಿಮರ್ಶೆಗಳು
Suchith Shetty
ಜೂನ್ 12, 2024
ಸುಪರ್
4 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Ruadargoud Patil
ಜೂನ್ 13, 2024
Wyreyrwtrser
ಒಬ್ಬ ವ್ಯಕ್ತಿ ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?
Basavaraj K
ಜೂನ್ 12, 2024
👌👌
10 ಜನರು ಈ ವಿಮರ್ಶೆ ಸಹಾಯಕವಾಗಿದೆಯೆಂದು ಗುರುತಿಸಿದ್ದಾರೆ
ಈ ವಿಷಯ ನಿಮಗೆ ಸಹಾಯಕವಾಗಿದೆಯೇ?

ಹೊಸದೇನಿದೆ



• ಈಗ ನೀವು ಮೆಸೇಜ್‍ಗಳನ್ನು ಕಳುಹಿಸಿದ ನಂತರ 15 ನಿಮಿಷಗಳೊಳಗೆ ಎಡಿಟ್ ಮಾಡಬಹುದು. ಮೆಸೇಜ್‍ ಮೇಲೆ ದೀರ್ಘವಾಗಿ ಒತ್ತಿ ಮತ್ತು ‘ಎಡಿಟ್’ ಆಯ್ಕೆಮಾಡಿ ಎಡಿಟ್ ಮಾಡುವುದನ್ನು ಆರಂಭಿಸಿ.
• ಗ್ರೂಪ್ ಚಾಟ್‌ಗಳಲ್ಲಿ ಸದಸ್ಯರ ಪ್ರೊಫೈಲ್ ಫೋಟೋಗಳು ಕಾಣಿಸುತ್ತವೆ.

ಈ ಫೀಚರ್‌ಗಳು ಮುಂಬರುವ ವಾರಗಳಲ್ಲಿ ಬರಲಿವೆ. WhatsApp ಬಳಸಿದ್ದಕ್ಕಾಗಿ ಧನ್ಯವಾದಗಳು!